ರಸಪ್ರಶ್ನೆ / ಕ್ವಿಜ್ ಬ್ಯಾಂಕ್

ರಸಪ್ರಶ್ನೆ / ಕ್ವಿಜ್  ಬ್ಯಾಂಕ್ 

ವಿಷಯ: ವಿಜ್ಞಾನ
                                                ವರ್ಗ:7 ನೇ                                              

1. ಜಿರಳೆ ಗಳಲ್ಲಿ ಗಾಳಿಯು ದೇಹದ ಒಳಪ್ರವೇಶಿಸುವ ಭಾಗ ಯಾವುದು?
        ಉತ್ತರ-   ಸ್ಪೈ ರಕಲ್ ಗಳು
2. ನಾವು ಉಸಿರಾಡುವಾಗ ಯಾವ ಅನಿಲವನ್ನು ತೆಗೆದುಕೊಳ್ಳುತ್ತೇವೆ?
ಉತ್ತರ- ಆಮ್ಲಜನಕ
3. ಕಪ್ಪೆಗಳು ಉಸಿರಾಡುವಾಗ ಶ್ವಾಸಕೋಶ ಹಾಗೂ  ಚರ್ಮದ ಮೂಲಕ ಶ್ವಾಸ ಕ್ರಿಯೆ ನಡೆಯುತ್ತದೆ.
ಉತ್ತರ- ಸರಿ
4. ಮೀನಿನ ಉಸಿರಾಟದ ಅಂಗ ಯಾವುದು?
ಉತ್ತರ- ಕಿವಿರು
5. ಜೀವಕೋಶವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ- ರಾಬರ್ಟ್ ಹುಕ್
6. ಪರ್ವತಾರೋಹಿಗಳು ತಮ್ಮೊಡನೆ ಆಕ್ಸಿಜನ್ ಕೊಂಡೊಯ್ಯುತ್ತಾರೆ ಏಕೆ?
ಉತ್ತರ- ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತದೆ.
7. ಹೃದಯದಲ್ಲಿ ಎಷ್ಟು ಕೋಣೆಗಳಿವೆ?
ಉತ್ತರ- 4
8. ಹೃದಯ ಬಡಿತ ಗಳನ್ನು ಅಳೆಯಲು ಬಳಸುವ ಉಪಕರಣ ಯಾವುದು?
ಉತ್ತರ- ಸ್ಟೆತೋಸ್ಕೋಪ್
9. ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವ ಅಂಗ ಯಾವುದು?
ಉತ್ತರ- ಅಪದಮನಿ
10. ರಕ್ತವನ್ನು ಕೆಂಪಾಗಿ ಕಾಣುವಂತೆ ಮಾಡುವುದು ಯಾವುದು?
ಉತ್ತರ- ಹಿಮೋಗ್ಲೋಬಿನ್
11. ರಕ್ತದ ಗುಂಪುಗಳು ಎಷ್ಟು?
ಉತ್ತರ- 4
12. ಸಸ್ಯದ ವಿವಿಧ ಭಾಗಗಳಿಗೆ ಆಹಾರವನ್ನು ಸಾಗಿಸುವ ವಾಹಕ ಅಂಗಾಂಶ ಯಾವುದು?
ಉತ್ತರ- ಫ್ಲೋಯಂ
13. ಸಸ್ಯದ ವಿವಿಧ ಭಾಗಗಳಿಗೆ ನೀರು ಮತ್ತು ಲವಣಾಂಶಗಳನ್ನು ಸಾಗಿಸುವ ವಾಹಕ ಅಂಗಾಂಶ ಯಾವುದು?
ಉತ್ತರ- ಕ್ಸೈಲಮ
14. ಆರೋಗ್ಯವಂತ ಮಾನವನ ಹೃದಯ ಬಡಿತವು ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
ಉತ್ತರ- 72 ಬಾರಿ
15. ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕುವ ಕ್ರಿಯೆಗೆ ಏನೆನ್ನುತ್ತಾರೆ?
ಉತ್ತರ- ವಿಸರ್ಜನೆ
16. ಸಂತಾನೋತ್ಪತ್ತಿಯ ವಿಧಗಳು ಎಷ್ಟು?
ಉತ್ತರ- ಎರಡು
17. ಸಸ್ಯದ ಸಂತಾನೋತ್ಪತ್ತಿಯ ಭಾಗ ಯಾವುದು?
ಉತ್ತರ- ಹೂ
18. ಪರಾಗಸ್ಪರ್ಶ ದಲ್ಲಿ ಎಷ್ಟು ವಿಧಗಳು?
ಉತ್ತರ- ಎರಡು
19. ಬೀಜಕ ಉತ್ಪತ್ತಿಗೆ ಒಂದು ಉದಾಹರಣೆ ಕೊಡಿ.
ಉತ್ತರ- ಶಿಲಿಂದ್ರ
20. ಏಕಮಾನ ಕಾಲದಲ್ಲಿ ಒಂದು ಕಾಯವು ಚಲಿಸಿದ ದೂರ ವನ್ನು ಏನೆಂದು ಕರೆಯುತ್ತಾರೆ?
ಉತ್ತರ- ಜವ
21. ವಿದ್ಯುತ್ ಬಲ್ಬ್ ನಲ್ಲಿ ಯಾವ ತಂತಿಯನ್ನು ಬಳಸುತ್ತಾರೆ?
ಉತ್ತರ- ಟಂಗ್ಸ್ಟನ್
22. ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮ ವನ್ನು ಕಂಡುಹಿಡಿದವರು ಯಾರು?
ಉತ್ತರ- ಹ್ಯಾನ್ಸ್ ಕ್ರಿಶ್ಚಿಯನ್ ಆರ್ಸ್ಟೆಡ್
23. ವಿದ್ಯುತ್ ಬಲ್ಬ್ ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ- ಥಾಮಸ್ ಅಲ್ವಾ ಎಡಿಸನ್
24. ಮಸೂರ ಗಳಲ್ಲಿ ಎಷ್ಟು ವಿಧಗಳು?
ಉತ್ತರ- ಎರಡು
25. ಬೆಳಕು ಯಾವ ರೇಖೆಯಲ್ಲಿ ಚಲಿಸುತ್ತದೆ?
ಉತ್ತರ- ಸರಳರೇಖೆಯಲ್ಲಿ
26. ಬಿಳಿ ಬಣ್ಣದಲ್ಲಿ ಎಷ್ಟು ಬಣ್ಣಗಳು ಅಡಗಿವೆ?
ಉತ್ತರ- ಏಳು
27. ನೀರಿನ ಅಣುಸೂತ್ರ ವೇನು?
ಉತ್ತರ- H2O
28. ನೀರು ಬಹುಪಾಲು ವಸ್ತುಗಳನ್ನು ತನ್ನಲ್ಲಿ ಕರಗಿಸಿ ಕೊಳ್ಳುತ್ತದೆಯೆ.
ಉತ್ತರ- ಹೌದು
29. ಚಲಿಸಿದ ದೂರವನ್ನು ಅಳೆಯುವ ಮಾಪನ ಯಾವುದು?
ಉತ್ತರ- ದೂರಮಾಪಕ
30. ಜವದ ಏಕಮಾನ?
ಉತ್ತರ -  m/s

Comments

Popular posts from this blog

Student expression

About us