ರಸಪ್ರಶ್ನೆ / ಕ್ವಿಜ್ ಬ್ಯಾಂಕ್
ರಸಪ್ರಶ್ನೆ
ವಿಷಯ: ವಿಜ್ಞಾನ ತರಗತಿ : ೫
1. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?
ಉತ್ತರ: ಹುಲಿ.
2. ಪ್ರಾಣಿ ಪ್ರಪಂಚದಲ್ಲಿ ಯಾವುದರ ಸಂಖ್ಯೆ ಅತಿ ಹೆಚ್ಚು?
ಉತ್ತರ: ಕೀಟಗಳು.
3. ಚಿರತೆಯು ಗಂಟೆಗೆ ಎಷ್ಟು ಕಿಲೋಮೀಟರ್ ಓಡುತ್ತದೆ.
ಉತ್ತರ:100km.
4. ಜೇನು ನೊಣಗಳು ಹೂವಿನ ಮೇಲೆ ಕುಳಿತು ಏನನ್ನು ಹೀರಿಕೊಳ್ಳುತ್ತದೆ.
ಉತ್ತರ- ಮಕರಂದ.
5. ಬಿದಿರು ಯಾವ ಜಾತಿಗೆ ಸೇರಿದ ಸಸ್ಯ?
ಉತ್ತರ: ಹುಲ್ಲು.
6. ಕೀಟಹಾರಿ ಸಸ್ಯ ಗಳಿಗೆ ಉದಾಹರಣೆ ಹೇಳು
ಉತ್ತರ: ಡ್ರಾಸಿರಾ.
7. ಸಸ್ಯ ಪ್ರಪಂಚದಲ್ಲಿ ಅತಿ ದೊಡ್ಡ ಬೀಜ ಯಾವುದು?
ಉತ್ತರ: ಕೊಕೊ-ಡಿ-ಮೆರ್.
8. ಅತ್ಯಂತ ದೊಡ್ಡ ಹೂ ಯಾವುದು?
ಉತ್ತರ: ರಫಸಿಯ..
9. ಅತ್ಯಂತ ಚಿಕ್ಕ ಹೂ ಯಾವುದು?
ಉತ್ತರ: ವುಲ್ಫಿಯಾ.
10. ಗುಲ್ಕನ್ ಯಾವ ಹೂವಿನಿಂದ ತಯಾರಿಸುತ್ತಾರೆ?
ಉತ್ತರ: ಗುಲಾಬಿ.
11. ಜಲ ಸಂಪನ್ಮೂಲದಲ್ಲಿ ಪ್ರಪಂಚದಲ್ಲಿ ಅತಿ ಶ್ರೀಮಂತ ರಾಷ್ಟ್ರ ಯಾವುದು?
ಉತ್ತರ: ಭಾರತ.
12. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ: ಆಗುಂಬೆ.
13. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಉತ್ತರ: ಮೌಸಿನ್ ರಾಮ್.
14. ಜಲಾಶಯಗಳ ನೀರನ್ನು ಶುದ್ಧೀಕರಿಸಲು ಏನನ್ನು ಸಾಕುತ್ತಾರೆ?
ಉತ್ತರ: ಮೀನು.
15. ಸೂರ್ಯನ ಕಿರಣಗಳು ದೇಹದಲ್ಲಿ ಯಾವ ಜೀವಸತ್ವವನ್ನು ಉತ್ಪಾದಿಸಲು ಸಹಾಯಮಾಡುತ್ತವೆ?
ಉತ್ತರ: ಜೀವಸತ್ವ ಡಿ.
16. ಅಯೋಡಿನ್ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಗಳಗಂಡ.
17. ಜೀವಸತ್ವ ಎ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಇರುಳುಗಣ್ಣು.
18. ವಿಟಮಿನ್ ಸಿ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ಸ್ಕರ್ವಿ.
20. ವಿಟಮಿನ್ ಡಿ ಕೊರತೆಯಿಂದ ಬರುವ ರೋಗ ಯಾವುದು?
ಉತ್ತರ: ರಿಕೆಟ್ಸ್.
21. ಭಾರತದಲ್ಲಿ ಅತ್ಯಂತ ದೊಡ್ಡ ಕೊಳಚೆ ಪ್ರದೇಶ ಎಲ್ಲಿದೆ?
ಉತ್ತರ: ಮುಂಬೈನ ಧಾರಾವಿ.
22. ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಎಲ್ಲಿದೆ?
ಉತ್ತರ: ದುಬೈ .
23. ಹೃದಯ ಬಡಿತವನ್ನು ತಿಳಿಯಲು ಬಳಸುವ ಉಪಕರಣ ಯಾವುದು?
ಉತ್ತರ: ಸ್ಟೆತೋಸ್ಕೋಪ್.
24. ನಮ್ಮ ದೇಹದಲ್ಲಿ ಎಷ್ಟು ಮೂಳೆಗಳಿವೆ?
ಉತ್ತರ:206.
25. ಭಾರತದ ಪ್ರಧಾನ ಸಾರಿಗೆ ಸಾಧನ ಯಾವುದು?
ಉತ್ತರ. ರೈಲು ಸಾರಿಗೆ.
26. ಸಮುದ್ರದ ಆಳದಲ್ಲಿ ಸಂಚರಿಸುವ ನೌಕೆ ಯಾವುದು?
ಉತ್ತರ: ಸಬ್ ಮರಿನ್.
27. ಮರಭೂಮಿಯ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?
ಉತ್ತರ: ಒಂಟೆ.
28. ಸಾರಿಗೆಗೆ ಬಳಸಲಾದ ಮೊಟ್ಟ ಮೊದಲ ಪ್ರಾಣಿ ಯಾವುದು?
ಉತ್ತರ: ನಾಯಿ.
29. ಗಣಕಯಂತ್ರವನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ಚಾರ್ಲ್ಸ್ ಬ್ಯಾಬೇಜ್.
30. ರೇಡಿಯೋ ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ಮಾರ್ಕೋನಿ.
31. ವಿಮಾನ ಕಂಡು ಹಿಡಿದ ವಿಜ್ಞಾನಿ ಯಾರು?
ಉತ್ತರ: ರೈಟ್ ಸಹೋದರರು.
32. ರಾಷ್ಟ್ರೀಯ ಮರ ಯಾವುದು?
ಉತ್ತರ: ಆಲದ ಮರ.
33. ರಾಷ್ಟ್ರೀಯ ಪಕ್ಷಿ ಯಾವುದು?
ಉತ್ತರ: ನವಿಲು.
34. ರಾಷ್ಟ್ರೀಯ ಹಣ್ಣು ಯಾವುದು?
ಉತ್ತರ: ಮಾವು.
35. ರಾಷ್ಟ್ರೀಯ ಹೂವು ಯಾವುದು?
ಉತ್ತರ: ಕಮಲ.
36. ಜೀವಿಗಳ ಉಸಿರಾಡುತ್ತವೆ (ಸರಿ /ತಪ್ಪು )
ಉತ್ತರ - ಸರಿ.
37. ಸಸ್ಯಗಳು ಆಹಾರವನ್ನು ಯಾವ ಭಾಗದಲ್ಲಿ ತಯಾರಿಸಿಕೊಳ್ಳುತ್ತವೆ?
ಉತ್ತರ- ಎಲೆ.
38. ಎಲೆಗಳು ಹಸಿರಾಗಿರಲು ಕಾರಣ ವೇನು?
ಉತ್ತರ- ಪತ್ರಹರಿತು.
39. ಕೀಟಹಾರಿ ಸಸ್ಯ ಗಳಿಗೆ ಉದಾಹರಣೆ ಹೇಳು.
ಉತ್ತರ - ಡ್ರಾಸಿರಾ, ನೆಪೆಂಥಿಸ್ .
40. ಸಸ್ಯ ಹಾಗೂ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳಿಗೆ ಏನೆಂದು ಕರೆಯುತ್ತಾರೆ?
ಉತ್ತರ- ಮಿಶ್ರಹಾರಿಗಳು.
41. ಏಕದಳ ಸಸ್ಯಗಳಿಗೆ ಉದಾಹರಣೆ ಹೇಳು.
ಉತ್ತರ- ಜೋಳ ,ರಾಗಿ.
42. ಮಾಂಸಾಹಾರಿ ಗೆ ಒಂದು ಉದಾಹರಣೆ ಕೊಡಿ.
ಉತ್ತರ- ಹುಲಿ.
43. ನಿನ್ನ ಕುಟುಂಬದಲ್ಲಿ ಎಷ್ಟು ತಲೆಮಾರು ಗಳಿವೆ?
ಉತ್ತರ- .....
44. ಎರಡು ತಲೆಮಾರಿನವರು ವಾಸಿಸುವ ಚಿಕ್ಕ ಕುಟುಂಬವು ಯಾವ ಕುಟುಂಬದ ವಿಧ.
ಉತ್ತರ- ವಿಭಕ್ತ ಕುಟುಂಬ.
45. ಸಮುದಾಯದಲ್ಲಿ ಎಷ್ಟು ವಿಧಗಳು?
ಉತ್ತರ- ಮೂರು ವಿಧ.
46. ಸಾಹಸಕಡೆಗಳಿಗೆ ಒಂದು ಉದಾಹರಣೆ ಬರೆ .
ಉತ್ತರ- ಪರ್ವತಾರೋಹಣ.
47. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಶಿಖರ ಯಾವುದು?
ಉತ್ತರ: ಮೌಂಟ್ ಎವರೆಸ್ಟ್.
48.ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಯಾರು?
ಉತ್ತರ: ಬಚೇಂದ್ರಿ ಪಾಲ್.
48. ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು ಯಾರು?
ಉತ್ತರ: ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನೋರ್ಗೆ.
49. ಸೂರ್ಯನಿಂದ ದೊರಕುವ ಶಕ್ತಿಯನ್ನು ಏನೆಂದು ಕರೆಯುತ್ತಾರೆ?
ಉತ್ತರ: ಸೌರಶಕ್ತಿ.
50. ರಾಷ್ಟ್ರೀಯ ಅರಣ್ಯ ನೀತಿ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು?
ಉತ್ತರ- 1988 ರಲ್ಲಿ.
51. ವೃಕ್ಷಮಾತೆ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ- ಸಾಲುಮರದ ತಿಮ್ಮಕ್ಕ.
52. ಚಿಪ್ಕೋ ಚಳುವಳಿ ಯನ್ನು ಯಾರು ಪ್ರಾರಂಭಿಸಿದರು?
ಉತ್ತರ- ಸುಂದರಲಾಲ್ ಬಹುಗುಣ.
53. ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಯಾವುದು?
ಉತ್ತರ- ನೈಟ್ರೋಜನ್.
54. ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಎಷ್ಟು ಪ್ರಮಾಣದಲ್ಲಿದೆ?
ಉತ್ತರ- ಶೇಕಡ 21.
55. ವಾಯುವಿನಲ್ಲಿ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ ಎಷ್ಟಿದೆ?
ಉತ್ತರ: 0.04.
56. ಭೂಮಿಯ ಮೇಲ್ಭಾಗ ಶೇಕಡ ಎಷ್ಟು ನೀರಿದೆ?
ಉತ್ತರ- 71 ಶೇಕಡ.
57. ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ?
ಉತ್ತರ- ಸಾಗರಗಳಲ್ಲಿ.
58. ಎಷ್ಟು ಬಗೆಯ ಕೃಷಿಕರು ಇರುತ್ತಾರೆ?
ಉತ್ತರ- 3.
59. ನಿನ್ನ ಜಿಲ್ಲೆಯ ಮುಖ್ಯ ಆಹಾರ ಯಾವುದು?
ಉತ್ತರ- ಜೋಳ ಅಕ್ಕಿ ಇತ್ಯಾದಿ.
60. ದ್ರವ್ಯದ ಸ್ಥಿತಿಗಳು ಎಷ್ಟು?
ಉತ್ತರ-3.
61. ಘನ ವಸ್ತುಗಳಲ್ಲಿ ಅನುಗಳ ಜೋಡನೆ ಹೇಗಿರುತ್ತದೆ?
ಉತ್ತರ-ಒತ್ತೊತಾಗಿ.
62. ದ್ರವ್ಯರಾಶಿಯ ಅಂತರಾಷ್ಟ್ರೀಯ ಮೂಲಮಾನ ಯಾವುದು?
ಉತ್ತರ- ಕಿಲೋಗ್ರಾಂ.
63. ಸಾಂದ್ರತೆಯ ಅಂತರಾಷ್ಟ್ರೀಯ ಮೂಲಮಾನ ಯಾವುದು?
ಉತ್ತರ- kg/m3.
64. ಹೈಡ್ರೋಜನ್ ಸಂಕೇತ ವೇನು?
ಉತ್ತರ- H.
65. ಎರಡು ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬೆರೆತಾಗ ಏನು ಉಂಟಾಗುತ್ತವೆ?
ಉತ್ತರ- ಸಂಯುಕ್ತ.
66. ಪ್ರಚನ ಶಕ್ತಿ ಮತ್ತು ಚಲನಶಕ್ತಿ ಗಳ ಒಟ್ಟು ಮೊತ್ತ ವನ್ನು ಏನೆಂದು ಕರೆಯುತ್ತಾರೆ?
ಉತ್ತರ- ಯಾಂತ್ರಿಕ ಶಕ್ತಿ.
67. ಭೂಮಿಯ ಆಕಾರ ಯಾವುದು?
ಉತ್ತರ- ಜಿಯಾಡ್.
68. ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ?
ಉತ್ತರ- 8.
69. ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು?
ಉತ್ತರ- ಬುಧ.
70. ಜೀವಿಗಳು ವಾಸಿಸುವ ಏಕೈಕ ಗ್ರಹ ಯಾವುದು?
ಉತ್ತರ- ಭೂಮಿ.
71. ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ ಯಾವುದು?
ಉತ್ತರ- ಗುರು ಗ್ರಹ.
72. ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು?
ಉತ್ತರ- ಶುಕ್ರ.
73. ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಯಾವುದು?
ಉತ್ತರ- ನೆಪ್ಚೂನ್.
74. ಭೂಮಿಯ ಉಪಗ್ರಹ ಯಾವುದು?
ಉತ್ತರ- ಚಂದ್ರ.
75. ಅತ್ಯಂತ ಸುಂದರವಾದ ಗ್ರಹ ಯಾವುದ?
ಉತ್ತರ- ಶನಿ.
76. 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಧೂಮಕೇತು ಯಾವುದು?
ಉತ್ತರ: ಹ್ಯಾಲಿ ಧೂಮಕೇತು.
77. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ಯಾರು? ಉತ್ತರ- ನೀಲ್ ಆರ್ಮ್ಸ್ಟ್ರಾಂಗ್
78. ಮಂಗಳ ಗ್ರಹದ ಉಪಗ್ರಹಗಳು ಯಾವವು?
ಉತ್ತರ: ಫೋಬೋಸ್ ಮತ್ತು ಡೈಮೋಜ್.
79.ನೀರಿನ ಕುದಿಯುವ ಬಿಂದು ಎಷ್ಟು ?
ಉತ್ತರ : ೧೦೦ ಡಿಗ್ರಿ ಸೆಲ್ಸಿಯಸ್ .
8೦ . ಮಂಜುಗಡ್ಡೆಯ ಘನೀಕರಣ ಬಿಂದು ಎಷ್ಟು?
ಉತ್ತರ : ೦ ಡಿಗ್ರಿ ಸೆಲ್ಸಿಯಸ್ .
Comments
Post a Comment