ಸೇತುಬಂಧ 2021-22
ನಿಮ್ಮ ಶಾಲೆಯ ಸೇತುಬಂಧ ಕಾರ್ಯಕ್ರಮವನ್ನು ನಿರ್ವಹಿಸುವ ಬಗೆ.
ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯು 2021-22 ನೇ ಸಾಲಿನ ಸೇತುಬಂಧ ಕಾರ್ಯಕ್ರಮವನ್ನು ನಡೆಸುವ ಪರಿಷ್ಕೃತ ಆದೇಶವನ್ನು ಪ್ರಕಟಿಸಿದ್ದು ಅದರಂತೆ 2021-22 ನೇ ಸಾಲಿನಲ್ಲಿ ನಮ್ಮ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಕೈಗೊಂಡು ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ನಿಗದಿಪಡಿಸಿದ ಸಾಮರ್ಥ್ಯಗಳನುಸಾರ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ಅಭ್ಯಾಸ ಹಾಳೆಗಳನ್ನು ತಯಾರಿಸಿ ಮಕ್ಕಳಿಗೆ ಯೋಜನೆ 1 ಮತ್ತು 2 ಪ್ರಕಾರ ನೀಡಬೇಕು. ನೀಡಿರತಕ್ಕಂತಹ ಚಟುವಟಿಕೆಗಳನ್ನು ಮರಳಿ ಅಭ್ಯಾಸ ಹಾಳೆಗಳ ಮೂಲಕ ಪಡೆದುಕೊಂಡು ಮೌಲ್ಯಮಾಪನ ಮಾಡಬೇಕು. ನಲಿ ಕಲಿ ಮಕ್ಕಳಿಗೆ 60 ದಿನದ ಕಾರ್ಯಕ್ರಮ 4 ಮತ್ತು 5ನೇ ತರಗತಿ ಮಕ್ಕಳಿಗೆ 45 ದಿನಗಳ ಸೇತುಬಂಧ ಕಾರ್ಯಕ್ರಮ ಮತ್ತು 6 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ 30 ದಿನಗಳ ಸೇತುಬಂಧ ಕಾರ್ಯದ ಮೌಲ್ಯಮಾಪನವು ನಿರ್ವಹಿಸಿ ಮಕ್ಕಳು ಸಾಮರ್ಥ್ಯ ಅನುಸಾರವಾಗಿ ಪಡೆದುಕೊಂಡಂತಹ ಗ್ರೇಡ್ ಗಳನ್ನು ನಮೂದಿಸಲು ಅವರಿಗೆ ಪ್ರತಿ 15 ದಿನಗಳಿಗೊಮ್ಮೆ ನಲಿ-ಕಲ ಮತ್ತು 4 ಮತ್ತು 5ನೇ ತರಗತಿ ಮಕ್ಕಳಿಗೆ ಕೈಗೊಳ್ಳುವುದು. ಪ್ರತಿ 10 ದಿನಗಳಿಗೊಮ್ಮೆ 6ರಿಂದ 10ನೇ ತರಗತಿ ಮಕ್ಕಳಿಗೆ ಕೈಗೊಂಡು ಅವರು ಪಡೆದಂತಹ ಗ್ರೇಡ್ ಗಳನ್ನು ಮಕ್ಕಳಿಗೆ ನೀಡಬೇಕು ನಂತರ ಪ್ರತಿವರ್ಷ ಮಾಡಿದಂತೆ ಪರಿಹಾರ ಬೋಧನೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಆದೇಶ ಪ್ರತಿ downloadಗಾಗಿ [click here].
ಆಗಸ್ಟ್ ತಿಂಗಳ ಮಕ್ಕಳ ಪರ್ಯಾಯ ಕಲಿಕಾ ಯೋಜನೆ ಹಾಳೆಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
Comments
Post a Comment