Posts

Showing posts from November, 2020

HOW TO DELETE TRANSFER APPLICATION

Image
 Watch this video to know how to delete wrong application filling by you.

TEACHER TRANSFER 2020-21

Image
   ಶಿಕ್ಷಕರ ವರ್ಗಾವಣೆ ೨೦೨೦-೨೧ ರ ಮಾಹಿತಿಗಾಗಿ ಈ ವಿಡಿಯೋ   

ಶಿಕ್ಷಕರ ಸಂಘದ ಚುನಾವಣೆ.

  ಅತ್ಮೀಯ ಶಿಕ್ಷಕ ಮಿತ್ರರೇ,  ತನ್ನ ಅವಧಿಗಿಂತಲು  ಸುಮಾರು ಒಂದು ವರ್ಷಗಳ ಕಾಲ ಹೆಚ್ಚು ಆಡಳಿತ ನಡೆಸಿದ ಶಿಕ್ಷಕರ ಸಂಘದ ಚುನಾವಣೆ ಘೋಷಣೆಯಾಗಿದೆ.       ದಿನಾಂಕ/26/11/2020  ರಿಂದ 28/11/2020ರ ವರೆಗೆ ನಾಮಪತ್ರ ಸಲ್ಲಿಕೆ.  29/11/2020 ನಾಮಪತ್ರ ವಾಪಸ್ಸು ಪಡೆದು ಕೊಳ್ಳುವ ದಿನ. 6/12/2020 ರಂದು ಭಾನುವಾರ ಮತದಾನ.  ಸಮಯ :- 8-30 ರಿಂದ 4-30 ರ ವರೆಗೆ. ಅದೇ ದಿನ ಸಂಜೆ   5-30ರಿಂದ ಏಣಿಕೆ ಪ್ರಾರಂಭ..    ತಾಲ್ಲೂಕು, ಜಿಲ್ಲಾ, ರಾಜ್ಯ, ಸಂಘದ ಪ್ರತಿನಿಧಿಗಳ ಚುನಾವಣೆ   9 /12/2020 ರಿಂದ  11/12/2020 ನಾಮಪತ್ರ ಸಲ್ಲಿಕೆ.     13/12/2020 ನಾಮಪತ್ರ ವಾಪಸ್ಸು ಪಡೆಯುವುದು.  20/12/2020 ತಾಲ್ಲೂಕಿನಲ್ಲಿ ಚುನಾವಣೆ . ಇದೀಗ ಬಂದ ಮಾಹಿತಿ. ನಿಮ್ಮ ಮತವನ್ನು ಚಲಾಯಿಸಿ ಸಂಘವನ್ನು ಬಲಿಷ್ಠಗೊಳಿಸಿ.

ಶಿಕ್ಷಣಕ್ಕೆ ಕೊರೊನಾ ಕೊಕ್ಕೆ

 ಸಾಂಕ್ರಾಮಿಕ ರೋಗ ಕೊರೊನಾ 2020 ಸಂಪೂರ್ಣ ಶೈಕ್ಷಣಿಕ ವರ್ಷವನ್ನು ನುಂಗಿಹಾಕಿದೆ. ಕರ್ನಾಟಕದಲ್ಲಿ ರೋಗದ ಇಳಿಮುಖ ಕಂಡರು, ಎರಡನೆ ಅಲೆಯ ಕಾರಣ ರಾಜ್ಯದ ಜನತೆ ಮತ್ತು ಕರ್ನಾಟಕ ಸರ್ಕಾರ ಈ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಪ್ರಾರಂಭಿಸಲು ಹಿಂದೆಟು ಹಾಕುತ್ತಿದೆ. ನವೆಂಬರ್ 17 ವಾರ್ಷಿಕೋತ್ಸವ ಆಚರಿಸಿಕೊಂಡ NOVEL CORONA -19 ತನ್ನ ರೌದ್ರತೆಯನ್ನು ಹಾಗೆಯೆ ಮುಂದುವರೆಸಿಕೊಂಡು ಹೋಗುತ್ತಿದೆ.      ಡಿಸೆಂಬರ ಅಂತ್ಯದವರೆಗು 1 ರಿಂದ 12 ನೇ ತರಗತಿಯ ಶಾಲೆ/ಕಾಲೇಜುಗಳನ್ನು ತೆರೆಯುವುದಿಲ್ಲ ಎಂದು ಘೋಷಣೆ ಮಾಡಿದೆ. ಮಾನ್ಯ ಶಿಕ್ಷಣ ಸಚಿವರ ಕೂಸು ' ವಿದ್ಯಾಗಮ ' ಕೂಡ ಆರಂಭಿಸುವ ಲಕ್ಷಣಗಳಿಲ್ಲ. ಶಾಲೆ ಆರಂಭಿಸುವವರೆಗೂ  ಆನ್ ಲೈನ್ ಮೂಲಕವೇ ಶಿಕ್ಷಣ ನಡೆಯಲಿದೆ. ಸರ್ಕಾರವು ಮಕ್ಕಳಿಗಾಗಿ ಚಂದನವಾಹಿನಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ 23/11/2020 ರಿಂದ ಪಾಠಗಳನ್ನು ಪ್ರಾರಂಭ ಮಾಡಿದೆ. ವೇಳಾಪಟ್ಟಿಯನ್ನು ಈಗಾಗಲೆ ಪ್ರಕಟಿಸಿದೆ.  ಮಕ್ಕಳ ಕಲಿಕೆಯು ಈ ವರ್ಷ ICT ಯ ಮೂಲಕವೇ ಮುಗಿದು ಹೋಗುತ್ತದೆಯೊ ಎಂಬ ಭಯ ಕಾಡುತ್ತಿದೆ. ಏಕೆಂದರೆ ನೈಜ ಅನುಭವವೇ ಜ್ಞಾನ ಕಟ್ಟಿ ಕೊಳ್ಳಲು ಸಹಾಯ ಮಾಡುತ್ತದೆ. ICTಯು ಪಡೆದುಕೊಂಡ ಜ್ಞಾನದ ವಿಸ್ತರಣೆಗೆ ಸಹಾಯ ಮಾಡುತ್ತದೆ ಮತ್ತು ಜ್ಞಾನವನ್ನು ಗಟ್ಟಿಗೊಳಿಸುತ್ತದೆ.  ಆದ್ದರಿಂದ ಆದಷ್ಟು ಬೇಗ ಕೊರೊನಾ ಹೋಗಲಿ, ಶಾಲೆಗಳು ಪ್ರಾರಂಭವಾಗಲಿ.