Posts

ಶಾಲಾ ಸಂಸತ್ತು.

Image
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದಬಾಳ ಬಿ. ಶಾಲಾ ಸಂಸತ್ತಿನ ರಚನೆ . ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ಈ ವರ್ಷವೂ ಕೂಡ ಶಾಲಾ ಸಂಸತ್ತು ರಚನೆ ಕಾರ್ಯವನ್ನು ಕೈಗೊಳ್ಳಲಾಯಿತು. ಈ ವರ್ಷ ತುಂಬಾ ವಿಭಿನ್ನವಾಗಿ ಅಂದರೆ ಮತದಾನಕ್ಕೆ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಅನ್ನು ಬಳಸಲಾಯಿತು. ಹೇಗೆಂದರೆ ಮೊಬೈಲ್ ನಲ್ಲಿ ಈವಿಎಂ ಆಪ್ ಅನ್ನು ಬಳಸಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟನನ್ನು ಸ್ಥಾಪಿಸಿ ಮತದಾನ ಮಕ್ಕಳಿಂದ ಮಾಡಿಸಲಾಯಿತು. ಈ ಎಲ್ಲಾ ಪ್ರಕ್ರಿಯೆಯು ಸಾಮಾನ್ಯ ಚುನಾವಣೆ ನಡೆಯುವ ರೀತಿಯಲ್ಲಿ ನಮ್ಮ ಶಾಲೆಯಲ್ಲಿ ನಡೆಸಲಾಯಿತು. ಅಂದರೆ, ಮೊದಲು ನಾಮಪತ್ರ ಸಲ್ಲಿಕೆ, ಮತದಾನಕ್ಕೆ ಮುನ್ನ ಪ್ರಚಾರ, ಮತದಾನ ಮತ್ತು ಫಲಿತಾಂಶ. ಇದಾದ ನಂತರ ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ, ಖಾತೆಗಳ ಹಂಚಿಕೆ ನಂತರ ಖಾತೆಗಳನ್ನು ನಿರ್ವಹಿಸುವ ರೀತಿಯನ್ನು ಮಕ್ಕಳಿಗೆ ತಿಳಿಸಿ ಕೊಡಲಾಯಿತು. ಈ ಕುರಿತಾದ ಚಿತ್ರಗಳು ಮತ್ತು ವಿಡಿಯೋಗಳನ್ನು ಇಲ್ಲಿ ನೋಡಬಹುದು. ಪೂರ್ವಭಾವಿ ಸಭೆ ನಾಮಪತ್ರ ಸಲ್ಲಿಕೆಗೆ ತಯಾರಿ ವಿದ್ಯಾರ್ಥಿಗಳಿಂದ ನಾಮಪತ್ರ ಸಲ್ಲಿಕೆ.  ಮತದಾನ   ಫಲಿತಾಂಶ   ಖಾತೆ ಹಂಚಿಕೆ ಮತ್ತು ಪ್ರಮಾಣ ವಚನ ಸ್ವೀಕಾರ  ಶಾಲಾ ಸಂಸತ್ತು  ರಚನೆ ಕಾರ್ಯಕ್ರಮ ಮುಕ್ತಾಯ.

ಸೇತುಬಂಧ 2021-22

 ನಿಮ್ಮ ಶಾಲೆಯ ಸೇತುಬಂಧ ಕಾರ್ಯಕ್ರಮವನ್ನು ನಿರ್ವಹಿಸುವ ಬಗೆ. ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯು 2021-22 ನೇ ಸಾಲಿನ ಸೇತುಬಂಧ ಕಾರ್ಯಕ್ರಮವನ್ನು ನಡೆಸುವ ಪರಿಷ್ಕೃತ ಆದೇಶವನ್ನು ಪ್ರಕಟಿಸಿದ್ದು ಅದರಂತೆ 2021-22 ನೇ ಸಾಲಿನಲ್ಲಿ ನಮ್ಮ ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಕೈಗೊಂಡು ಮಕ್ಕಳಿಗೆ ಹಿಂದಿನ ತರಗತಿಯಲ್ಲಿ ನಿಗದಿಪಡಿಸಿದ ಸಾಮರ್ಥ್ಯಗಳನುಸಾರ ಕಾರ್ಯಕ್ರಮಗಳನ್ನು,  ಚಟುವಟಿಕೆಗಳನ್ನು ಅಭ್ಯಾಸ ಹಾಳೆಗಳನ್ನು ತಯಾರಿಸಿ ಮಕ್ಕಳಿಗೆ ಯೋಜನೆ 1 ಮತ್ತು 2 ಪ್ರಕಾರ ನೀಡಬೇಕು. ನೀಡಿರತಕ್ಕಂತಹ ಚಟುವಟಿಕೆಗಳನ್ನು ಮರಳಿ ಅಭ್ಯಾಸ ಹಾಳೆಗಳ ಮೂಲಕ ಪಡೆದುಕೊಂಡು ಮೌಲ್ಯಮಾಪನ ಮಾಡಬೇಕು. ನಲಿ ಕಲಿ ಮಕ್ಕಳಿಗೆ 60 ದಿನದ ಕಾರ್ಯಕ್ರಮ 4 ಮತ್ತು 5ನೇ ತರಗತಿ ಮಕ್ಕಳಿಗೆ 45 ದಿನಗಳ ಸೇತುಬಂಧ ಕಾರ್ಯಕ್ರಮ ಮತ್ತು 6 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ 30 ದಿನಗಳ ಸೇತುಬಂಧ ಕಾರ್ಯದ ಮೌಲ್ಯಮಾಪನವು ನಿರ್ವಹಿಸಿ ಮಕ್ಕಳು ಸಾಮರ್ಥ್ಯ ಅನುಸಾರವಾಗಿ ಪಡೆದುಕೊಂಡಂತಹ ಗ್ರೇಡ್ ಗಳನ್ನು ನಮೂದಿಸಲು ಅವರಿಗೆ ಪ್ರತಿ 15 ದಿನಗಳಿಗೊಮ್ಮೆ ನಲಿ-ಕಲ ಮತ್ತು 4 ಮತ್ತು 5ನೇ ತರಗತಿ ಮಕ್ಕಳಿಗೆ ಕೈಗೊಳ್ಳುವುದು. ಪ್ರತಿ 10 ದಿನಗಳಿಗೊಮ್ಮೆ 6ರಿಂದ 10ನೇ ತರಗತಿ ಮಕ್ಕಳಿಗೆ ಕೈಗೊಂಡು ಅವರು ಪಡೆದಂತಹ ಗ್ರೇಡ್ ಗಳನ್ನು ಮಕ್ಕಳಿಗೆ ನೀಡಬೇಕು ನಂತರ ಪ್ರತಿವರ್ಷ ಮಾಡಿದಂತೆ ಪರಿಹಾರ ಬೋಧನೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದೇಶ ಪ್ರ...

2021-22 Evaluation system in Karnataka.

ಕರೋನಾ-19 ದ ಮೂರನೇ ಅಲೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರವು 2021 - 22 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಕೈಗೊಳ್ಳಬೇಕಾದ ಮೌಲ್ಯಮಾಪನದ ದಿನಾಂಕಗಳನ್ನು  ಮತ್ತು ಮೌಲ್ಯಮಾಪನ ಕ್ರಮವನ್ನು ಸೂಚಿಸಿ ಆದೇಶ ಹೊರಡಿಸಿರುತ್ತಾರೆ. ಇದು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಈ ಆದೇಶದಂತೆ ಮೌಲ್ಯಮಾಪನವನ್ನು ಮಕ್ಕಳ ಆನ್ಲೈನ್ ಮತ್ತು ಆಫ್ಲೈನ್ ಕಲಿಕಾ ಪ್ರಕ್ರಿಯೆಯನ್ನು ಅನುಸರಿಸಿ ನೀಡಲಾಗಿರುವ ಅಭ್ಯಾಸ ಹಾಳೆಗಳು, ಗೃಹ ಪಾಠಗಳು, ಸ್ವ ಕಲಿಕಾ ಚಟುವಟಿಕೆಗಳನ್ನು ಅನುಸರಿಸಿ ಒಟ್ಟು 4 ರೂಪಣಾತ್ಮಕ ಮೌಲ್ಯಮಾಪನವನ್ನು ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಕೈಗೊಳ್ಳಬೇಕು. ಆಮೂಲಕ ಮಕ್ಕಳ ಕಲಿಕಾ ಚಕ್ರವನ್ನು ಮುಂದುವರಿಸಬೇಕೆಂದು ಆದೇಶಿಸಿರುತ್ತಾರೆ. ಆದೇಶ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ಶಾಲೆಯಲ್ಲಿ ಒಂದು ಪ್ರತಿಯನ್ನು ಕಾಯ್ದಿರಿಸಬೇಕು. ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಡೆ ಮುಟ್ಟಿ. [ click here ] to download.  ಸೇತುಬಂದ ಕಾರ್ಯಕ್ರಮದ ಮೌಲ್ಯಮಾಪನ ಮಾಡುವ ಬಗ್ಗೆ ಕುರಿತು ಶಿಕ್ಷಣ ಇಲಾಖೆಯ ಆದೇಶ ಪ್ರತಿಯನ್ನು ಪಡೆದುಕೊಳ್ಳಲು ಕೆಳಗಡೆ ಮುಟ್ಟಿ. [ Click here ] to download   ಶಿಕ್ಷಣ ಇಲಾಖೆಯ ಮೌಲ್ಯಮಾಪನ ಮಾರ್ಗದರ್ಶನದಂತೆ ಪುಟಗಳು ಆದೇಶ ಪ್ರತಿಯನ್ನು ಸರಿಯಾಗಿ ಓದಿಕೊಳ್ಳಿ ನಿಮ್ಮ ಮಕ್ಕಳ ವರ್ಕ್ಶೀಟ್ ಗಳು ಆದಾರದ ಮೇಲೆ ನಿಮ್ಮ ಮೌಲ್ಯಮಾಪನದ ಮಾನಕಗಳ ಮೇಲೆ ಗ್ರೇಡ್ A ಮತ...